ಈ ತಂತ್ರಾಂಶದಲ್ಲಿ ಉಪಯೋಗಿಸುವ ಸ್ಕ್ರೀನ್ ಗಳು:

ಆಯ್ಕೆಗಳು:

ಸ್ಥಿರ ಮಾಹಿತಿ

ಸಂಸ್ಕರಣೆ

ವರದಿಗಳು

ನಿರ್ವಹಣೆ

ಪ್ರವರ್ಗಗಳು

ಭಾಷೆಗಳು

ಧರ್ಮಗಳು

ಶಾಲೆ

ಅಧ್ಯಾಪಕರು

ವಿದ್ಯಾರ್ಥಿಗಳು**

ಪಠ್ಯವಿಷಯ ಮತ್ತು ಗರಿಷ್ಠ ಅಂಕಗಳು

ಬಿಸಿ ಊಟದ ಪ್ರಮಾಣ

ಅಕೌಂಟ್ ಮಾಸ್ಟರ್*

ದೈನಿಕ ಹಾಜರಾತಿ

ಬಿಸಿ ಊಟದ ಪದಾರ್ಥಗಳ ಸ್ವೀಕೃತಿ

ಹಾಜರಾತಿಧೃಢೀಕರಣ/ಊಟದ ಲೆಕ್ಕ

ಪರೀಕ್ಷೆಯಲ್ಲಿನ ಅಂಕಗಳ ನಮೂದನೆ

ಮಾಸಿಕ ಮುಕ್ತಾಯ(ಬಿಸಿ ಊಟ)

ಆರಂಭಿಕ ಶಿಲ್ಕು(ಅಕೌಂಟ್ಸ್)*

ಸ್ವೀಕೃತಿ/ಆದಾಯ(ಅಕೌಂಟ್ಸ್)*

ಸ್ವೀಕೃತಿ/ಆದಾಯ(ಅಕೌಂಟ್ಸ್)*

ವಾರ್ಷಿಕ ಮುಕ್ತಾಯ(ಅಕೌಂಟ್ಸ್)*

ಶಿಕ್ಷಕ ಪಟ್ಟಿ

ವಿದ್ಯಾರ್ಥಿ ಪಟ್ಟಿ

ಹಾಜರಾತಿ ಪಟ್ಟಿ

ಅಂಕ ಪಟ್ಟಿ

ಶಿಕ್ಷಕ ಪಟ್ಟಿ (.ods ~= .xls)*

ವಿದ್ಯಾರ್ಥಿ ಪಟ್ಟಿ (.ods ~= .xls)*

ಹಾಜರಾತಿ ಪಟ್ಟಿ (.ods ~= .xls)*

ಅಂಕ ಪಟ್ಟಿ (.ods ~= .xls)*

ಮಾಸಿಕ ಹಾಜರಾತಿ(ಧರ್ಮ)

ಮಾಸಿಕ ಹಾಜರಾತಿ(ಪ್ರವರ್ಗ)

ಮಾಸಿಕ ಬಿಸಿ ಊಟ

ಆಯ/ವ್ಯಯ ಪಟ್ಟಿ*

ಪಾಸ್ವರ್ಡ್ ಬದಲಾವಣೆ

ಬ್ಯಾಕ್ ಅಪ್ (ಎಕ್ಸ್ಪೋರ್ಟ್)

ರಿಸ್ಟೋರ್(ಇಂಪೋರ್ಟ್)

ಹಳೆಯ ದಾಖಲೆಗಳನ್ನು ಅಳಿಸು

ಎಲ್ಲವನ್ನು ಅಳಿಸು

ಗಮನಿಸಿ: *ಗುರುತಿರುವ ಸೌಲಭ್ಯಗಳನ್ನು ಅಂತರ್ಜಾಲ ಆವೃತ್ತಿಯಲ್ಲಿ ಒದಗಿಸಿಲ್ಲ.

**ಅಂತರ್ಜಾಲ ಆವೃತ್ತಿಯಲ್ಲಿ ಪೂರ್ವನಿಗದಿತ ಸಂಖ್ಯೆಯ ವಿದ್ಯಾರ್ಥಿಗಳ ವಿವರಗಳನ್ನು ಮಾತ್ರ ಸೇರಿಸಬಹುದು.


ಗಣಕೀಕರಣದ ಪ್ರಕಿಯೆಯಲ್ಲಿ ಹಲವಾರು ತಂತ್ರಾಂಶಗಳಿದ್ದು ಅವುಗಳನ್ನು ನಾಲ್ಕು ವರ್ಗಗಳಾಗಿ ವಿಭಾಗಿಸಬಹುದು


ಒಮ್ಮೆ ನೀಡಬೇಕಾಗಿರುವ /ಪದೇ ಪದೇ ಬದಲಾವಣೆಯಾಗದಂತಹ ವಿವರಗಳನ್ನು ಒದಗಿಸುವ ಸ್ಕ್ರೀನ್ ಗಳು:

ಸಂ.

ಸ್ಕ್ರೀನ್ ಹೆಸರು

ಅಗತ್ಯತೆ/ ಉಪಯೋಗಿಸುವ ಕ್ರಮ

1

ಶಾಲೆ

ಶಾಲೆಯ ವಿವರಗಳನ್ನು ಒಳಗೊಂಡಿರುತ್ತದೆ. ಪ್ರತೀ ಶಾಲೆಗೂ ಒಂದು ಏಕೈಕ ಸಂಕೇತ ವಿರಬೇಕು. ಶಾಲೆಯೊಂದರ ವಿವರಗಳನ್ನು ಮಾದರಿಗಾಗಿ ನೀಡಿದ್ದು ಅಲ್ಲಿನ ವಿವರಗಳನ್ನು ಕೂಡಲೇ ಬದಲಿಸಿ(ಉದಾ : ಶಿಕ್ಷಣ ಇಲಾಖೆ ನೀಡುವ ಇ ಎಮ್ ಐ ಸಿ ಕೋಡ್). ಒದಗಿಸಿದ ವಿವರಗಳಲ್ಲಿ ಯಾವುದೇ ಬದಲಾವಣೆ ಇದ್ದರೂ ಅದನ್ನು ಇಲ್ಲಿ ನಮೂದಿಸಬೇಕು. ಪ್ರತೀ ವರ್ಷವೂ, ಶೈಕ್ಷಣಿಕ ವರ್ಷದ ಆರಂಭದ ದಿನಾಂಕ(ಉದಾ: 28/05/20009) ಮತ್ತು ಅಂತಿಮ ದಿನಾಂಕವನ್ನು(ಉದಾ: 10/04/2010) ಇಲ್ಲಿ ನೀಡಬೇಕು.

ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಶಾಲಾತಂತ್ರವನ್ನು ಬಳಸಲು ಒಂದು ಅನ್ ಲಾಕ್ ಕೋಡ್ ಎನ್ನುವ ಸಂಕೇತದ ಅಗತ್ಯವಿದ್ದು ಅದನ್ನು ಇಲ್ಲಿ ನೀಡಬೇಕು. ಈ ಅನ್ ಲಾಕ್ ಕೋಡ್ ಪಡೆಯಲು ಹಲವು ವಿವರಗಳೊಂದಿಗೆ ನಮ್ಮನ್ನು ಸಂಪರ್ಕಿಸಿ.

2

ಪ್ರವರ್ಗಗಳು

ಸಾಮಾನ್ಯವಾಗಿ ಉಪಯೋಗಿಸುವ 5 ಪ್ರವರ್ಗಗಳನ್ನು( .ಜಾತಿ, ಸಾಮಾನ್ಯ ..) ನೀಡಲಾಗಿದ್ದು, ಇನ್ನೂ ಹೊಸ ಪ್ರವರ್ಗವನ್ನು ಸೇರಿಸಬೇಕಿದ್ದರೆ ಯಾವಾಗ ಬೇಕಾದರೂ ಸೇರಿಸಬಹುದು

3

ಧರ್ಮಗಳು

ಸಾಮಾನ್ಯವಾಗಿ ಉಪಯೋಗಿಸುವ 3 ಧರ್ಮಗಳನ್ನು(ಹಿಂದು ..) ನೀಡಲಾಗಿದ್ದು, ಇನ್ನೂ ಹೊಸ ಧರ್ಮವನ್ನು ಸೇರಿಸಬೇಕಿದ್ದರೆ ಯಾವಾಗ ಬೇಕಾದರೂ ಸೇರಿಸಬಹುದು

4

ಭಾಷೆಗಳು

ಸಾಮಾನ್ಯವಾಗಿ ಉಪಯೋಗಿಸುವ 10 ಭಾಷೆಗಳನ್ನು(ಕನ್ನಡ,ಇಂಗ್ಲಿಷ್ ..) ನೀಡಲಾಗಿದ್ದು, ಇನ್ನೂ ಹೊಸ ಭಾಷೆಯನ್ನು ಸೇರಿಸಬೇಕಿದ್ದರೆ ಯಾವಾಗ ಬೇಕಾದರೂ ಸೇರಿಸಬಹುದು

5

ಪಠ್ಯವಿಷಯ ಮತ್ತು ಗರಿಷ್ಠ ಅಂಕಗಳು

ಸಾಮಾನ್ಯವಾಗಿ ವರ್ಷದಲ್ಲಿ ಎರಡು ಪರೀಕ್ಷೆಗಳಿದ್ದು (ಮಧ್ಯ ವಾರ್ಷಿಕ/ಸೆಮೆಸ್ಟರ್, ಅಂತಿಮ), ಅಲ್ಲಿನ 6 ವಿಷಯಗಳಿಗೆ ಇರುವ ಗರಿಷ್ಠ ಅಂಕಗಳ ನಮೂದನೆ. ಇದನ್ನು ಆಧರಿಸಿ ಗ್ರೇಡ್ ನ್ನು ನಿಗದಿಪಡಿಸಲಾಗುವುದು. ಕೆಳಗಿನ ತರಗತಿಗಳಲ್ಲಿ ಅಂಕಗಳ ಬದಲು ಗ್ರೇಡ್ ನೀಡುವ ಪರಿಪಾಠವಿದ್ದರೂ, ಅಂತಹ ಸಂದರ್ಭಗಳಲ್ಲಿ ,ಗರಿಷ್ಠ ಅಂಕಗಳು 100 ಎಂದು ನಮೂದಿಸಿದರೆ ಅಂಕ ಪಟ್ಟಿ ತಯಾರಿಸಲು ಸುಲಭವಾಗುತ್ತದೆ.

6

ಬಿಸಿ ಊಟದ ಪ್ರಮಾಣ

ಶಾಲೆಯಲ್ಲಿ ಬಿಸಿ ಊಟ ಒದಗಿಸುತ್ತಿದ್ದರೆ ತರಗತಿವಾರು ಪ್ರತೀ ವಿದ್ಯಾರ್ಥಿಗೆ ನಿಗದಿ ಪಡಿಸಿರುವ ವಿವಿಧ ಆಹಾರ ಧಾನ್ಯಗಳ/ಇತರೆ ಹಣದ ಪ್ರಮಾಣಗಳನ್ನು ಇಲ್ಲಿ ನಮೂದಿಸಬೇಕು. ಪ್ರಮಾಣವನ್ನು ಸೊನ್ನೆ ಎಂದು ನಮೂದಿಸಿದರೆ ಅಂತಹ ವಸ್ತುಗಳ ಲೆಕ್ಕಾಚಾರವನ್ನು ಹಾಕುವುದಿಲ್ಲ. ಉದಾಹರಣೆಗೆ ಬಿಸಿ ಊಟ ಮಾಡುವವರ ಸಂಖ್ಯೆಯನ್ನು ಮಾತ್ರ ಇಲಾಖೆಗೆ ಒದಗಿಸುತ್ತಿದ್ದರೆ, ಎಲ್ಲಾ ಪ್ರಮಾಣಗಳನ್ನು ಸೊನ್ನೆ ಎಂದು ನಮೂದಿಸಬೇಕು. ಬದಲಾದ ಪ್ರಮಾಣದ ವಿವರಗಳನ್ನು ತಿಂಗಳ ಮಧ್ಯದಿಂದ ಅನ್ವಯವಾಗುವಂತೆ ಬದಲಿಸದಿರುವುದು ಒಳ್ಳೆಯದು.

7

ಅಧ್ಯಾಪಕರು

ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರ/ಹೊಸದಾಗಿ ಸೇರಿದವರ ವಿವರಗಳನ್ನು ಇಲ್ಲಿ ನೀಡಬೇಕು. ಅಧ್ಯಾಪಕರ ಮಾಹಿತಿಯ ಯಾವುದೇ ಬದಲಾವಣೆಯನ್ನು(ವರ್ಗಾವಣೆ ,ನಿವೃತ್ತಿ . . . ), ಇಲ್ಲಿ ನೀಡಬೇಕು.

8

ವಿದ್ಯಾರ್ಥಿಗಳು


ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳ ವಿವರಗಳನ್ನು ಗಣಕೀಕರಣದ ಆರಂಭದಲ್ಲಿ ನೀಡಬೇಕು. ಶಾಲೆ ಬಿಟ್ಟು ಹೋದವವರ ವಿವರಗಳ ಅಗತ್ಯತೆ ಇಲ್ಲ. ಶಾಲೆಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳ ವಿವರಗಳನ್ನು ಸೇರಿದಾಗಲೆಲ್ಲ ನೀಡಬೇಕು. ಪ್ರತೀ ವಿದ್ಯಾರ್ಥಿಗೂ ಬದಲಿಸಲಾಗದ ಒಂದು ಏಕೈಕ ಸಂಕೇತ(ಕೋಡ್) ವಿರಬೇಕು. ( ಉದಾ: ಅಡ್ಮಿಶನ್ ಸಂಖ್ಯೆ). ಈ ಸಂಕೇತವನ್ನು ಹೊರತು ಪಡಿಸಿ, ವಿದ್ಯಾರ್ಥಿಯ ವಿವರಗಳಲ್ಲಿ ಬದಲಾವಣೆ ಇದ್ದಲ್ಲಿ ಅವುಗಳನ್ನು ಇಲ್ಲಿ ಬದಲಿಸಬೇಕು. ಗಣಕೀಕರಣದ ಆರಂಭದಲ್ಲಿ ಮತ್ತು ಶೈಕ್ಷಣಿಕ ವರ್ಷದ ಆರಂಭದಲ್ಲಿ ಇಲ್ಲಿನ ವಿವರಗಳ ಆಧಾರದಿಂದ ಹಾಜರಾತಿ ಪಟ್ಟಿ( ಅಟೆಂಡೆನ್ಸ್ ರಿಜಿಸ್ಟರ್) ನ್ನು ಸಿದ್ಧಪಡಿಸಲಾಗುತ್ತದೆ. ಯಾವುದೇ ಸಮಯದಲ್ಲಿ ಕಲಿಯುತ್ತಿರುವ ವಿಭಾಗದ(ಸೆಕ್ಷನ್) ಬದಲಾವಣೆಯಾದಲ್ಲಿ ಅದನ್ನು ಇಲ್ಲಿ ಗುರುತಿಸಬೇಕು. ಶಾಲೆಯಲ್ಲಿನ ಅಂತಿಮ ತರಗತಿಯಲ್ಲಿ ಕಲಿಯುವವರೆಗೆ ವಿದ್ಯಾರ್ಥಿಯ ಹಾಜರಾತಿ ಪಟ್ಟಿ ತಾನೇ ತಾನಾಗಿ ಸಿದ್ಧಗೊಳ್ಳುತ್ತದೆ.


ಪ್ರತಿ ದಿನ/ತಿಂಗಳು/ವರ್ಷದಲ್ಲಿ ವಿವರಗಳನ್ನು ನೀಡಬೇಕಾದ ಸ್ಕ್ರೀನ್ ಗಳು:

ಸಂ.

ಸ್ಕ್ರೀನ್ ಹೆಸರು

ಅಗತ್ಯತೆ/ ಉಪಯೋಗಿಸುವ ಕ್ರಮ

1

ದೈನಿಕ ಹಾಜರಾತಿ


ಶಾಲೆ ನಡೆಯುವ ದಿನಗಳೆಲ್ಲೆಲ್ಲ ಹಾಜರಾತಿಯನ್ನು ತೆಗೆಯ ಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಜರಿರುತ್ತಾನೆಂದು ಗಣಕವು ಪರಿಗಣಿಸುವುದರಿಂದ ಗೈರು ಹಾಜರಾದವರನ್ನು ಮಾತ್ರ ಗುರುತಿಸಿದರೆ ಸಾಕು. ತಪ್ಪಾಗುವ ಸಾಧ್ಯತೆಯನ್ನು ಕಡಿಮೆ ಮಾಡಲೋಸುಗ ಹಿಂದಿನ ದಿನದ ಹಾಜರಾತಿಯನ್ನು ತೆಗೆದಿಲ್ಲವಾದರೆ ಗಣಕವು ಅದನ್ನು ನಿಮ್ಮ ಗಮನಕ್ಕೆ ತರುತ್ತದೆ. ಹಾಗೂ ಗೈರು ಹಾಜರಾದವರನ್ನು ಗುರುತಿಸಿದಾಗ ಅವರ ಹೆಸರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಿಂದಿನ ದಿನದ ಹಾಜರಾತಿ ಪಟ್ಟಿಯ ಆಧಾರದ ಮೇಲೆ ಸದರಿ ದಿನದ ಹಾಜರಾತಿ ಪಟ್ಟಿ ಸಿದ್ಧಗೊಳ್ಳುತ್ತದೆ. ಶಾಲಾ ಆರಂಭದ ದಿನದ ಹಾಗೂ ತಂತ್ರಾಂಶವನ್ನು ಮೊತ್ತಮೊದಲಿಗೆ ಉಪಯೋಗಿಸಲು ಶುರು ಮಾಡಿದಾಗ ಹಾಜರಾತಿ ಪಟ್ಟಿಯನ್ನು ”ವಿದ್ಯಾರ್ಥಿಗಳ ನೋಂದಣಿ’ ಯನ್ನು ಆಧರಿಸಿ ಸಿದ್ಧಪಡಿಸಲಾಗುವುದು. ಹಾಜರಾತಿ ತೆಗೆದ ದಿನದಲ್ಲಿ ಬಿಸಿ ಊಟ ನೀಡದಿರುವ ಸಾಧ್ಯತೆ ಇದ್ದು, ಬಿಸಿ ಊಟ ನೀಡಿಲ್ಲವೆಂದು ಗುರುತಿಸಲು ಅವಕಾಶವಿದೆ. ಪರೀಕ್ಷಾ ದಿನಗಳಂದೂ ಹಾಜರಾತಿಯನ್ನು ತೆಗೆಯಬೇಕು.

2

ಬಿಸಿ ಊಟದ ಪದಾರ್ಥಗಳ ಸ್ವೀಕೃತಿ

ಶಾಲೆಯಲ್ಲಿ ಬಿಸಿ ಊಟ ನೀಡುತ್ತಿದ್ದು, ಪದಾರ್ಥಗಳನ್ನು ಸ್ವೀಕರಿಸುತ್ತಿದ್ದರೆ ಇದರ ಅಗತ್ಯ ಇರುತ್ತದೆ. ತಿಂಗಳಲ್ಲಿ ವಿವಿಧ ದಿನಗಳಲ್ಲಿ ಸ್ಚೀಕರಿಸಲ್ಪಡುವ ವಿವಿಧ ಪದಾರ್ಥಗಳ ಪ್ರಮಾಣಗಳನ್ನು ಒಟ್ಟಾಗಿ ಕೂಡಿಸಿ ಇಲ್ಲಿ ವಿವರಗಳನ್ನು ನೀಡಬೇಕು. ಅದೇ ರೀತಿ, ತಿಂಗಳಲ್ಲಿನ ನಷ್ಟದ/ಸೋರಿಕೆಯ ಪ್ರಮಾಣಗಳನ್ನು ಒಟ್ಟಾಗಿ ಕೂಡಿಸಿ ಇಲ್ಲಿ ವಿವರಗಳನ್ನು ನೀಡಬೇಕು. ನಷ್ಟದ ಪ್ರಮಾಣಕ್ಕೆ ಅನುಗುಣವಾಗಿ ದಾಸ್ತಾನು ಕಡಿಮೆ ಆಗುತ್ತದೆ. ಆದರೆ ವಿವರ - ಚಿಹ್ನೆಯಿಂದ ಕೂಡಿದ್ದರೆ(ಉದಾ -10.25) ದಾಸ್ತಾನು ಪ್ರಮಾಣ ಹೆಚ್ಚುತ್ತದೆ. ಗಣಕೀಕರಣದ ಆರಂಭದಲ್ಲಿ ಪದಾರ್ಥಗಳ ಆರಂಭಿಕ ದಾಸ್ತಾನನ್ನು ಒಮ್ಮೆ ಇಲ್ಲಿ ನೀಡಲೇಬೇಕು. ಆನಂತರ ತಿಂಗಳ ಆರಂಭಿಕ ದಾಸ್ತಾನನ್ನು ಗಣಕವೇ ಲೆಕ್ಕ ಹಾಕುತ್ತದೆ ಮತ್ತು ಅದನ್ನು ನೇರವಾಗಿ ಬದಲಿಸಲು ಬರುವುದಿಲ್ಲ. ಆದರೆ, ನಷ್ಟವನ್ನು ನಮೂದಿಸಿ ( + ಅಥವಾ -) ದಾಸ್ತಾನನ್ನು ಸರಿದೂಗಿಸಬಹುದು. ಬಿಸಿ ಊಟದ ಲೆಕ್ಕಾಚಾರಕ್ಕೆ ಸಂಬಂಧಿಸಿದ ತಂತ್ರಾಂಶವನ್ನು ವರ್ಷದ ಯಾವುದೇ ತಿಂಗಳ ಯಾವುದೇ ದಿನದಿಂದ ಆರಂಭಿಸಬಹುದಾದರೂ, ತಿಂಗಳ ಮೊದಲನೇ ತಾರೀಕಿನಿಂದ ಲೆಕ್ಕಾಚಾರ ಆರಂಭಿಸುವುದು ಉತ್ತಮ. ಈ ಸ್ಕೀನ್ ನಲ್ಲಿ ವಿವರಗಳನ್ನು ನೀಡುವ ದಿನದಂದು ಹಾಜರಾತಿಯ ಧೃಢೀಕರಣ/ ಊಟದ ಲೆಕ್ಕ(ಮುಂದೆ ತಿಳಿಸಿರುವ ಸ್ಕ್ರೀನ್ ) ಮಾಡಿರಬಾರದು. ಅಂತಹ ಸಂದರ್ಭಗಳಲ್ಲಿ ಪದಾರ್ಥಗಳ ವಿವರಗಳನ್ನು ಮಾರನೇ ದಿನದಂದು ನೀಡಬೇಕು. ಗಣಕೀಕರಣದ ಆರಂಭದಲ್ಲಿ ಬಿಸಿ ಊಟದ ಲೆಕ್ಕದ ಅಗತ್ಯವಿರದ ಶಾಲೆಗಳೂ ಕೂಡ ಪದಾರ್ಥಗಳ ಆರಂಭಿಕ ದಾಸ್ತಾನನ್ನು ೦ ಎಂದು ಇಲ್ಲಿ ನಮೂದಿಸಬೇಕು.ಹಾಗಿದ್ದಲ್ಲಿ ಮಾತ್ರ ಮೊತ್ತ ಮೊದಲ ದಿನದ ಹಾಜರಾತಿಯನ್ನು ತೆಗೆಯಲು ಸಾಧ್ಯ.

3

ಹಾಜರಾತಿಯ ಧೃಢೀಕರಣ/ ಊಟದ ಲೆಕ್ಕ

ಲೆಕ್ಕಾಚಾರದ ದಿನವನ್ನು ನಮೂದಿಸಿದಾಗ, ಆ ತಿಂಗಳಲ್ಲಿ ಈ ದಿನದ ವರೆಗಿನ ಲೆಕ್ಕಾಚಾರವನ್ನು ಪುನ: ಮಾಡಿ ದಿನದ ಆರಂಭಿಕ ದಾಸ್ತಾನನ್ನು ಲೆಕ್ಕ ಹಾಕಿ ದಿನದ ಅಂತಿಮ ದಾಸ್ತಾನನ್ನು ಗಣಕದಲ್ಲಿ ದಾಖಲಿಸುತ್ತದೆ. ಈ ಕಾರಣದಿಂದ ಒಮ್ಮೆ ದಿನದ ಲೆಕ್ಕವನ್ನು ಧೃಢೀಕರಿಸಿದ ಮೇಲೆ ಅದನ್ನು ಬದಲಿಸಲು ಬರುವುದಿಲ್ಲ (ಉದಾಹರಣೆಗೆ, 13/03/2010 ಎಂದು ದಿನಾಂಕ ನೀಡಿದರೆ, 01/03/2010 ರ ಆರಂಭಿಕ ದಾಸ್ತಾನನ್ನು ತೋರಿಸಿ, 12/03/2010 ರ ವರೆಗೆ ದಿನದ ಅಂತಿಮ ದಾಸ್ತಾನಿನ ಲೆಕ್ಕಾಚಾರ ತೋರಿಸಿ, 13/03/2010 ರ ಅಂತಿಮ ದಾಸ್ತಾನನ್ನು ಗಣಕದಲ್ಲಿ ದಾಖಲಿಸಲಾಗುತ್ತದೆ). ಇದನ್ನು ಉಪಯೋಗಿಸುವ ಮುಂಚೆ ಆ ದಿನದ ಹಾಜರಾತಿಯ ಪಟ್ಟಿಯನ್ನು ತೆಗೆದಿರಬೇಕು.ಇಲ್ಲಿ ಹಾಜರಾತಿಯ ಧೃಢೀಕರಣ ಮಾಡಿದ ಮೇಲೆ ಅದನ್ನು ತಿರುಗಿ ಬದಲಿಸಲು ಸಾಧ್ಯವಿಲ್ಲ. ಈ ಕಾರ್ಯವನ್ನು ಒಂದು ದಿನವೂ ಬಿಡದೆ ಪ್ರತೀ ದಿನವೂ ಮಾಡಬೇಕು.

4

ಪರೀಕ್ಷೆಯಲ್ಲಿನ ಅಂಕಗಳ ನಮೂದನೆ

ಪರೀಕ್ಷೆಯ ದಿನವನ್ನು ನೀಡಿ ವಿಷಯವಾರು, ತರಗತಿ ಮತ್ತು ವಿಭಾಗಗಳಿಗೆ ಅನುಗುಣವಾಗಿ ಅಂಕಗಳನ್ನು ನಮೂದಿಸಬಹುದು. ಅಂಕಗಳನ್ನು ಒಮ್ಮೆ ನಮೂದಿಸಿದ ಮೇಲೆ ಅದನ್ನು ಬದಲಿಸಲು ಸಾಧ್ಯವಿಲ್ಲ. ಯಾವುದೇ ವಿದ್ಯಾರ್ಥಿಯ ಅಂಕಗಳ ನಮೂದನೆಯಲ್ಲಿ ತಪ್ಪಾಗಿದ್ದರೆ, ತಿರುಗ ಆ ತರಗತಿಯ/ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಅಂಕಗಳನ್ನು ನಮೂದಿಸಬೇಕಾಗುತ್ತದೆ. ವರ್ಷದಲ್ಲಿ ಮಧ್ಯವಾರ್ಷಿಕ (ಸೆಮೆಸ್ಟರ್ 1) ಮತ್ತು ವಾರ್ಷಿಕ ಎಂದು ಎರಡು ಬಾರಿ ಪರೀಕ್ಷೆಗಳ ಅಂಕಗಳನ್ನು ನಮೂದಿಸಬಹುದು. ಪರೀಕ್ಷಾ ದಿನಗಳಂದೂ ಹಾಜರಾತಿಯನ್ನು ತೆಗೆದಿರಬೇಕು.

5

ಮಾಸಿಕ ಮುಕ್ತಾಯ (ಬಿಸಿ ಊಟ)

ತಿಂಗಳ ಎಲ್ಲ ದಿನಗಳ ’ಬಿಸಿ ಊಟದ ಲೆಕ್ಕ’ ಗಣನೆ ಆದ ಮೇಲೆ ಇದನ್ನು ಮಾಡಬೇಕು. ಪದಾರ್ಥಗಳ ತಿಂಗಳ ಕೊನೆ ದಿನದ ಶಿಲ್ಕು ಮುಂದಿನ ತಿಂಗಳ ಮೊದಲ ದಿನದ ಶಿಲ್ಕು ಆಗಿ ಪರಿವರ್ತನೆಗೊಳ್ಳುತ್ತದೆ. ಉದಾಹರಣೆಗೆ, ಏಪ್ರಿಲ್ ತಿಂಗಳಲ್ಲಿನ ಪದಾರ್ಥಗಳ ಅಂತಿಮ ಶಿಲ್ಕು ಮೇ ತಿಂಗಳ ಆರಂಭಿಕ ಶಿಲ್ಕು ಆಗಿ ಬದಲಾಗುತ್ತದೆ. ಇದನ್ನು ಮಾಡಿದ ಮೇಲೆ ಹಿಂದಿನ ತಿಂಗಳುಗಳ ಯಾವುದೇ ದಿನದ ಬಿಸಿ ಊಟದ ಲೆಕ್ಕ ತಿರುಗಿ ಹಾಕಲು ಆಗುವುದಿಲ್ಲ. ಬಿಸಿ ಊಟದ ಲೆಕ್ಕದ ಅಗತ್ಯವಿಲ್ಲದ ಶಾಲೆಗಳೂ ಈ ಕಾರ್ಯವನ್ನು ಪ್ರತೀ ತಿಂಗಳು ಮಾಡಲೇಬೇಕು.(ಮಾಸಿಕ ವರದಿಗಳಿಗಾಗಿ)


ಇಲಾಖೆಗೆ ಒದಗಿಸುವ/ಆಂತರಿಕ ಉಪಯೋಗಕ್ಕಿರುವ ವರದಿಗಳು:

ಸಂ.

ಸ್ಕ್ರೀನ್ ಹೆಸರು

ಅಗತ್ಯತೆ/ ಉಪಯೋಗಿಸುವ ಕ್ರಮ

1

ಶಿಕ್ಷಕ ಪಟ್ಟಿ

ಶಿಕ್ಷಕನ ಹೆಸರು ನೀಡಿದರೆ, ಆತನ ಹೆಸರಿಗೆ ಸಮೀಪ ಇರುವ ಎಲ್ಲಾ ಶಿಕ್ಷಕರ ವಿವರ ಸ್ಕ್ರೀನ್ ಮೇಲೆ ಮೂಡುತ್ತದೆ ಉದಾ : ಎಂದು ನೀಡಿದರೆ ಅಕ್ಷರದಿಂದ ಆರಂಭವಾಗುವ ಎಲ್ಲಾ ಶಿಕ್ಷಕರ ಎಲ್ಲಾ ವಿವರಗಳು ಕಾಣಿಸುತ್ತವೆ.

2

ವಿದ್ಯಾರ್ಥಿ ಪಟ್ಟಿ

ವಿದ್ಯಾರ್ಥಿಯ ಹೆಸರು ನೀಡಿದರೆ, ಆತನ ಹೆಸರಿಗೆ ಸಮೀಪ ಇರುವ ಎಲ್ಲಾ ವಿದ್ಯಾರ್ಥಿಗಳ ವಿವರ ಸ್ಕ್ರೀನ್ ಮೇಲೆ ಮೂಡುತ್ತದೆ ಉದಾ : ಎಂದು ನೀಡಿದರೆ ಅಕ್ಷರದಿಂದ ಆರಂಭವಾಗುವ ಎಲ್ಲಾ ವಿದ್ಯಾರ್ಥಿಗಳ ಎಲ್ಲಾ ವಿವರಗಳು ಕಾಣಿಸುತ್ತವೆ.

3

ಹಾಜರಾತಿ ಪಟ್ಟಿ

ದಿನದ,ತರಗತಿ,ವಿಭಾಗ ನೀಡಿ ಹಾಜರಾತಿ ಪಟ್ಟಿಯನ್ನು ಸ್ಕ್ರೀನ್ ಮೇಲೆ ನೋಡಬಹುದು.

4

ಅಂಕ ಪಟ್ಟಿ

ಪರೀಕ್ಷೆಯ ಅವಧಿ( ಮಧ್ಯ ವಾರ್ಷಿಕ/ವಾರ್ಷಿಕ) , ತರಗತಿ/ವಿಭಾಗ ನೀಡಿ ಅಂಕ ಪಟ್ಟಿಯನ್ನು ಸ್ಕ್ರೀನ್ ಮೇಲೆ ನೋಡಬಹುದು.

5

ಶಿಕ್ಷಕ ಪಟ್ಟಿ(.ods)

ಸ್ಕ್ರೀನ್ 1 ರಲ್ಲಿನ ವಿವರಗಳು ’ಎಕ್ಸೆಲ್’ ರೂಪಕ್ಕೆ ಸಮನಾದ .ods ರೂಪದ ಫೈಲ್ ನಲ್ಲಿ ಉಳಿಸಲಾಗುತ್ತದೆ. ಅದನ್ನು ಬೇಕಾದ ರೀತಿಯಲ್ಲಿ ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಬಹುದು.

6

ವಿದ್ಯಾರ್ಥಿಗಳ ಪಟ್ಟಿ(.ods)

ಸ್ಕ್ರೀನ್ 2 ರಲ್ಲಿನ ವಿವರಗಳು ’ಎಕ್ಸೆಲ್’ ರೂಪಕ್ಕೆ ಸಮನಾದ .ods ರೂಪದ ಫೈಲ್ ನಲ್ಲಿ ಉಳಿಸಲಾಗುತ್ತದೆ. ಅದನ್ನು ಬೇಕಾದ ರೀತಿಯಲ್ಲಿ ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಬಹುದು.

7

ಹಾಜರಾತಿ ಪಟ್ಟಿ(.ods)

ಸ್ಕ್ರೀನ್ 3 ರಲ್ಲಿನ ವಿವರಗಳು ’ಎಕ್ಸೆಲ್’ ರೂಪಕ್ಕೆ ಸಮನಾದ .ods ರೂಪದ ಫೈಲ್ ನಲ್ಲಿ ಉಳಿಸಲಾಗುತ್ತದೆ. ಅದನ್ನು ಬೇಕಾದ ರೀತಿಯಲ್ಲಿ ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಾಜರಾತಿಯ ದಿನಾಂಕದವರೆಗೆ ವಿದ್ಯಾರ್ಥಿ ಹಾಜರಾದ ಮತ್ತು ಗೈರುಹಾಜರಾಗಿರುವ ದಿನಗಳನ್ನು, ಹಾಜರಾತಿ% ನ್ನು ತೋರಿಸಲಾಗುತ್ತದೆ.

8

ಅಂಕ ಪಟ್ಟಿ(.ods)

ಸ್ಕ್ರೀನ್ 4 ರಲ್ಲಿನ ವಿವರಗಳು ’ಎಕ್ಸೆಲ್’ ರೂಪಕ್ಕೆ ಸಮನಾದ .ods ರೂಪದ ಫೈಲ್ ನಲ್ಲಿ ಉಳಿಸಲಾಗುತ್ತದೆ. ಅದನ್ನು ಬೇಕಾದ ರೀತಿಯಲ್ಲಿ ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಬಹುದು.

9

ಮಾಸಿಕ ಹಾಜರಾತಿ(ಧರ್ಮ)

ಶೈಕ್ಷಣಿಕ ವರ್ಷದಲ್ಲಿ ತಿಂಗಳುವಾರು/ಧರ್ಮವಾರು ದಾಖಲಾತಿ, ಸರಾಸರಿ ಹಾಜರಾತಿಯ ಅಂಕಿ ಅಂಶಗಳನ್ನು ನೀಡಲಾಗುತ್ತದೆ. ತಿಂಗಳ ಮಾಸಿಕ ಮುಕ್ತಾಯ (ಬಿಸಿ ಊಟ) ದ ಲೆಕ್ಕಹಾಕಿರಲೇ ಬೇಕು.

10

ಮಾಸಿಕ ಹಾಜರಾತಿ(ಪ್ರವರ್ಗ)

ಶೈಕ್ಷಣಿಕ ವರ್ಷದಲ್ಲಿ ತಿಂಗಳುವಾರು/ಧರ್ಮವಾರು ದಾಖಲಾತಿ, ಸರಾಸರಿ ಹಾಜರಾತಿಯ ಅಂಕಿ ಅಂಶಗಳನ್ನು ನೀಡಲಾಗುತ್ತದೆ. ತಿಂಗಳ ಮಾಸಿಕ ಮುಕ್ತಾಯ (ಬಿಸಿ ಊಟ) ದ ಲೆಕ್ಕಹಾಕಿರಲೇ ಬೇಕು.

11

ಮಾಸಿಕ ಬಿಸಿಊಟ

ಶೈಕ್ಷಣಿಕ ವರ್ಷದಲ್ಲಿ ತಿಂಗಳುವಾರು ಬಿಸಿ ಊಟದ ಪದಾರ್ಥಗಳ ಆರಂಭಿಕ ಶಿಲ್ಕು, ಸ್ವೀಕೃತಿ, ಬಳಕೆ, ಅಂತಿಮ ಶಿಲ್ಕು, ಉಟದ ದಿನಗಳು, ಊಟಗಳು .. ಇತರ ವಿವರಗಳನ್ನು ಇಲ್ಲಿ ನೀಡಲಾಗುತ್ತದೆ.ತಿಂಗಳ ಮಾಸಿಕ ಮುಕ್ತಾಯ(ಬಿಸಿ ಊಟ)ದ ಲೆಕ್ಕಹಾಕಿರಲೇ ಬೇಕು.

12

ವರ್ಗಾವಣೆ ಪತ್ರ.

ತರಗತಿಯನ್ನು ನೀಡಿ, ಅಂತಿಮ ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ಸಿದ್ಧಪಡಿಸಬಹುದು.

ವಿ.ಸೂ. ಕ್ರಮ ಸಂಖ್ಯೆ 5,6,7,8 ರಲ್ಲಿ ಸಿದ್ಧಗೊಳ್ಳುವ ಫೈಲ್ ಗಳನ್ನು ತೆರೆಯಲು ’ಓಪನ್ ಆಫೀಸ್’ ಎನ್ನುವ ಮುಕ್ತ ಮತ್ತು ಉಚಿತ ತಂತ್ರಾಂಶದ ಅಗತ್ಯತೆ ಇರುತ್ತದೆ. ಅದನ್ನು ಶಾಲಾ ತಂತ್ರಾಂಶದ ಜೊತೆಗೆ ವಿತರಿಸಲಾಗುತ್ತಿದ್ದು ಅದನ್ನೂ ಅನುಸ್ಥಾಪಿಸಬೇಕು. ವಿಶೇಷವಾಗಿ ಯುನಿಕೋಡ್ ಫಾಂಟ್ ಸಮಸ್ಯೆ ಉದ್ಭವಿಸುವುದರಿಂದ ಅಲ್ಲಿ ವಿವರಿಸಿದ ಕ್ರಮಗಳನ್ನು ಪಾಲಿಸಿ. ಇದರಿಂದ ಫಾಂಟ್ ಸಮಸ್ಯೆ ಉದ್ಭವಿಸುವುದಿಲ್ಲ. ಫೈಲ್ ನ್ನು ಸ್ಕ್ರೀನ್ ಮೇಲೆ ನೋಡುವುದಕ್ಕಿಂತ ಅದನ್ನು ಉಳಿಸಿ, ನಂತರ ತೆರೆದು ನೋಡುವುದು ಉತ್ತಮ. ವಿವರಗಳನ್ನು ತೋರಿಸುವ ಸೆಲ್ ಗಳ ಅಗಲ ಮತ್ತು ಎತ್ತರ ಸರಿಯಾಗಿಲ್ಲದಿದ್ದು ವಿವರಗಳು ಸರಿಯಾಗಿ ಮೂಡಿ ಬರದೇ ಇದ್ದರೆ, ಪೈಲ್ ನ್ನು ತೆರೆದು ಕೆಳಗಿನ ಕ್ರಮ ಅನುಸರಿಸಿ.

1. Edit >> Select All

2. Format >>Row >> optimal height ಆಯ್ಕೆಯಿಂದ ತೆರೆದುಕೊಳ್ಳುವ ಕಿಂಡಿಯಲ್ಲಿ Add ಎದುರು 0,0cm ನೀಡಿ.

3. Format >>column >> optimal width ಆಯ್ಕೆಯಿಂದ ತೆರುದುಕೊಳ್ಳುವ ಕಿಂಡಿಯಲ್ಲಿ Add ಎದುರು 0,0cm ನೀಡಿ.

ಹಣದ ಸ್ವೀಕೃತಿಯ/ಆದಾಯದ/ಖರ್ಚಿನ ವಿವರಗಳ ಅಕೌಂಟ್ಸ್ ಲೆಕ್ಕ:

ಸಂ.

ಸ್ಕ್ರೀನ್ ಹೆಸರು

ಅಗತ್ಯತೆ/ ಉಪಯೋಗಿಸುವ ಕ್ರಮ

1

ಅಕೌಂಟ್ ಮಾಸ್ಟರ್

ಇಲಾಖೆಯಿಂದ /ಇತರರಿಂದ ಅನುದಾನ ಸ್ವೀಕರಿಸುತ್ತಿದ್ದು ಅದರ ಲೆಕ್ಕ ಇಡಬೇಕಿದ್ದಲ್ಲಿ ಇದರ ಅಗತ್ಯ ಇರುತ್ತದೆ. ಇದರಲ್ಲಿ ಸ್ಥಿರ ಆಸ್ತಿ( 001-099 ಕೋಡ್), ಆದಾಯ( 001-099 ಕೋಡ್), ವ್ಯಯ ( 001-099 ಕೋಡ್) ಕ್ಕೆ ಸಂಬಂಧಿಸಿದಹಾಗೆ ಒಟ್ಟು 20 ಕೋಡ್ ಗಳನ್ನು ಮೊದಲೇ ನೀಡಲಾಗಿದೆ. ಅಗತ್ಯವಿದ್ದರೆ ಅವುಗಳ ಹೆಸರನ್ನು ಬದಲಿಸಬಹುದು ಹಾಗೂ ಹೊಸದಾಗಿ ಕೋಡ್ ಗಳನ್ನೂ ಇಲ್ಲಿ ಸೇರಿಸಬಹುದು.ಆದರೆ ಕೋಡ್ ಗಳನ್ನು ಬದಲಿಸಲು ಸಾಧ್ಯವಿಲ್ಲ.

2

ಆರಂಭಿಕ ಶಿಲ್ಕು ಅಕೌಂಟ್ಸ್)

ಶಾಲಾ ತಂತ್ರಾಂಶವನ್ನು ಆರಂಭಿಸುವ ಮುನ್ನ ವಿವಿಧ ಖಾತೆಗಳ ಆರಂಭಿಕ ಶಿಲ್ಕನ್ನು ನೀಡಬಹುದು

3

ಸ್ವೀಕೃತಿ/ಆದಾಯ (ಅಕೌಂಟ್ಸ್)

ಅನುದಾನ/ಹಣ ಸ್ವೀಕರಿಸಿದಾಗ ವಿವಿಧ ಬಾಬತ್ತುಗಳಿಗೆ ಅದರ ವಿಂಗಡಣೆಯನ್ನು ನಮೂದಿಸುವುದು. ಬಡ್ಡಿ/ದೇಣಿಗೆಯನ್ನು ಸ್ವೀಕರಿಸಿದಾಗ ಸಂಬಂಧಿಸಿದ ಅಕೌಂಟ್ ಗೆ( ಬ್ಯಾಂಕ್/ನಗದು) ಖಾತೆಗೆ ಹಣವನ್ನು ವರ್ಗಾಯಿಸಬಹುದು.

4

ವ್ಯಯ(ಅಕೌಂಟ್ಸ್)

ವಿವಿಧ ಬಾಬತ್ತುಗಳಿಗೆ ಮಾಡಿದ ಹಣದ ಖರ್ಚಿನ ವಿವರಗಳನ್ನು ನೀಡುವುದು. ಹಣ ಕೈಯಲ್ಲಿ ಉಳಿದರೆ ಉಳಿದ ಹಣವನ್ನು ತಿರುಗಿ ಅಕೌಂಟ್ ಗೆ(ಬ್ಯಾಂಕ್/ನಗದು) ಜಮಾ ಮಾಡಬಹುದು.

5

ಆಯ/ವ್ಯಯ ಪಟ್ಟಿ

ಆದಾಯ/ವ್ಯಯದ ವಿವರ ಸ್ಕ್ರೀನ್ ಮೇಲೆ ಮೂಡುತ್ತದೆ. ಅವಧಿಯ ದಿನಾಂಕಗಳನ್ನು ನೀಡಿ, ಬೇಕಾದ ಅವಧಿಯ ನಡುವಿನ ವಿವರಗಳನ್ನು ಮಾತ್ರ ಪಡೆಯಬಹುದು.

6

ವಾರ್ಷಿಕ ಮುಕ್ತಾಯ (ಅಕೌಂಟ್ಸ್)

ವರ್ಷದ ಕೊನೆಯಲ್ಲಿ(ಏಪ್ರಿಲ್ ನಲ್ಲಿ) ಇದನ್ನು ಮಾಡಬೇಕು. ವರ್ಷದ ಅಂತಿಮ ದಿನದ ಖಾತೆಗಳ ಶಿಲ್ಕು ಮುಂದಿನ ವರ್ಷದ ಅಯಾಯ ಖಾತೆಗಳ ಆರಂಭಿಕ ಶಿಲ್ಕು ಆಗಿ ಬದಲಾಗುತ್ತದೆ.

ನಿರ್ವಹಣಾ ಕ್ರಿಯೆಗಳು:

ಸಂ.

ಸ್ಕ್ರೀನ್ ಹೆಸರು

ಅಗತ್ಯತೆ/ ಉಪಯೋಗಿಸುವ ಕ್ರಮ

1

ಪ್ರವೇಶ

ಈ ತಂತ್ರಾಂಶವನ್ನು ಅಧಿಕೃತ ವ್ಯಕ್ತಿಗಳು ಮಾತ್ರ ಉಪಯೋಗಿಸಲೋಸುಗ ಅಂತಹವರಿಗೆ ಒಂದು ಸಂಕೇತ ಮತ್ತು ಪಾಸ್ವರ್ಡ್ ನ ಅಗತ್ಯ ಇರುತ್ತದೆ, ಇದರಲ್ಲಿ 'admin' ಮತ್ತು 'headmaster' ಎನ್ನುವ ಬಳಸುವವರು(ಯೂಸರ್ಸ್) ಇರುತ್ತಾರೆ. ತಂತ್ರಾಂಶವನ್ನು ಅನುಸ್ಥಾಪನೆಗೊಳಿಸಿದ ಮೇಲೆ ಮೊದಲಿನ ಪಾಸ್ವರ್ಡ್ ನ್ನು ಬದಲಿಸಬೇಕು. ಆ ನಂತರ ಅವರವರ ಪಾಸ್ವರ್ಡ್ ನೀಡಿ ತಂತ್ರಾಂಶವನ್ನು ಬಳಸಬಹುದು.

2

ಪಾಸ್ವರ್ಡ್ ಬದಲಾವಣೆ

ಪಾಸ್ವರ್ಡ್ ನ್ನು ಮೊದಲಿಗೆ ಮತ್ತು ಆಗಾಗ ಬದಲಿಸುತ್ತಿರಬೇಕು.

3

ಬ್ಯಾಕ್ ಅಪ್ (ಎಕ್ಸ್ಪೋರ್ಟ್)

ಡೇಟಾಬೇಸ್ ನಲ್ಲಿನ ಎಲ್ಲಾ ವಿವರಗಳನ್ನು ಒಂದೆಡೆ ಸುಸ್ಥಿರವಾಗಿ ಉಳಿಸಲು ಸಹಕಾರಿ. ವಾರಕ್ಕೊಮ್ಮೆಯಾದರೂ ಈ ಕಾರ್ಯವನ್ನು ಮಾಡಬೇಕು.

4

ರಿಸ್ಟೋರ್(ಇಂಪೋರ್ಟ್)

ಗಣಕವನ್ನು ಬದಲಿಸಿದಾಗ, ಅಜಾಗರೂಕತೆಯಿಂದ ಡೇಟಾಬೇಸ್ ನಲ್ಲಿನ ವಿವರಗಳು ನಶಿಸಿದಾಗ/ ಅಲ್ಲಿನ ವಿವರಗಳು ಬಹಳ ತಪ್ಪಿನಿಂದ ಕೂಡಿದ್ದರೆ ಕ್ರಮ ಸಂಖ್ಯೆ 3 ರಲ್ಲಿ ತೆಗೆದುಕೊಂಡ ಬ್ಯಾಕ್ ಅಪ್ ನ್ನು ಮೊದಲಿನ ಸ್ಥಿತಿಗೆ ಈ ಆಯ್ಕೆಯಿಂದ ಸುಸ್ಥಿತಿಗೆ ತರಬಹುದು. ರಿಸ್ಟೋರ್ ಮಾಡಿದಾಗ ಗಣಕದಲ್ಲಿ ಈಗಾಗಲೇ ಇರುವ ವಿವರಗಳು ಅಳಿಸಲ್ಪಟ್ಟು ಹೊಸವಿವರಗಳು ಉಳಿಸಲ್ಪಡುತ್ತವೆ.

5

ಹಳೆಯ ದಾಖಲೆಗಳನ್ನು ಅಳಿಸು

ಡೇಟಾಬೇಸ್ ನಲ್ಲಿ ಪ್ರತೀ ವರ್ಷ ಹೊಸ ಹೊಸ ವಿವರಗಳನ್ನು ನೀಡುತ್ತಾ ಹೋದಾಗ, ಗಣಕದಲ್ಲಿ ಜಾಗ ಕಡಿಮೆಯಾಗುತ್ತಾ ಹೋಗುವುದಲ್ಲದೆ, ಗಣಕವು ಸಮರ್ಥವಾಗಿ ಕೆಲಸ ಮಾಡುವುದೂ ಇಲ್ಲ. ಶೈಕ್ಷಣಿಕ ವರ್ಷ ನೀಡಿ, ಸಂಬಂಧಪಟ್ಟ ಶೈಕ್ಷಣಿಕ ವರ್ಷದ ಅನಗತ್ಯ ವಿವರಗಳನ್ನು ಗಣಕದಿಂದ ತೆಗೆಯಬಹುದು. ಇದನ್ನು ಉಪಯೋಗಿಸುವ ಮೊದಲು ಕ್ರಮ ಸಂಖ್ಯೆ 3 ರಲ್ಲಿನ ಹಾಗೆ ಬ್ಯಾಕ್ ಅಪ್ ಮಾಡಿಟ್ಟುಕೊಳ್ಳಿ. ಅಕಸ್ಮಾತ್ ತಪ್ಪಾದಲ್ಲಿ ರಿಸ್ಟೋರ್ ಮಾಡಲು ಸಾಧ್ಯವಾಗುತ್ತದೆ.

6

ಎಲ್ಲವನ್ನು ಅಳಿಸು

ಇದನ್ನು ಜಾಗರೂಕತೆಯಿಂದ ಉಪಯೋಗಿಸಬೇಕು. ಈ ಆಯ್ಕೆಯಿಂದ ನೀವು ಉಳಿಸಿರುವ ಎಲ್ಲಾ ವಿವರಗಳು ಅಳಿಸಿಹೋಗುತ್ತವೆ. ಇದನ್ನು ಉಪಯೋಗಿಸುವ ಮೊದಲು ಕ್ರಮ ಸಂಖ್ಯೆ 3 ರಲ್ಲಿನ ಹಾಗೆ ಬ್ಯಾಕ್ ಅಪ್ ಮಾಡಿಟ್ಟುಕೊಳ್ಳಿ. ಅಕಸ್ಮಾತ್ ತಪ್ಪಾದಲ್ಲಿ ರಿಸ್ಟೋರ್ ಮಾಡಲು ಸಾಧ್ಯವಾಗುತ್ತದೆ. ಈ ತಂತ್ರಾಂಶವನ್ನು ಪ್ರಯೋಗಾರ್ಥವಾಗಿ ಹಲವು ಸಮಯ ಉಪಯೋಗಿಸಿ, ಬಳಕೆಯೆ ಮೇಲೆ ಹಿಡಿತ ಬಂದಮೇಲೆ, ಈ ಆಯ್ಕೆಯನ್ನು ಮಾಡಿ, ಇಲ್ಲಿಯವರೆಗೆ ಉಳಿಸಿದ್ದನ್ನು ಈ ಆಯ್ಕೆಯಿಂದ ಅಳಿಸಿ, ಮೊದಲಿನಿಂದ ಆರಂಭಿಸಿ ಸರಿಯಾಗಿ ಮತ್ತು ಕ್ರಮಪ್ರಕಾರವಾಗಿ ಈ ತಂತ್ರಾಂಶವನ್ನುಉಪಯೋಗಿಸಬಹುದು.