'ಶಾಲಾತಂತ್ರ'

ಬಳಕೆಯ ಕೈಪಿಡಿ

(2.2)

ಕೊಡುಗೆ:

www.FREEganita.com,

www.eShale.org



ಇದು ’ಶಾಲಾ ತಂತ್ರಾಂಶ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ವಿದ್ಯಾಧಿಕಾರಿಗಳಿಗೆ ದಾಖಲೆಸಲ್ಲಿಸುವ, ಇರಿಸಿಕೊಳ್ಳುವ ಕೆಲಸದಲ್ಲಿ ಸಮಯ ಉಳಿಸುವ ವಿದ್ಯುನ್ಮಾನ ಸೌಲಭ್ಯ. ಶಿಕ್ಷಕರಾಗಿ ಅಗತ್ಯವಾಗಿ ಮಾಡಲೇಬೇಕಾಗಿರುವ ಬೋಧನಾಪ್ರಕ್ರಿಯೆಗೆ ಸಮಯಹೊಂದಿಸಲು ಇರುವ ಸುಲಭಮಾರ್ಗ.

ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯಕ್ರಮಗಳಿಗೆ ಶಾಲೆಗಳು, ಅಂಕಿ ಅಂಶಗಳನ್ನು ಶಿಕ್ಷಣ ಇಲಾಖೆಗೆ ಕಾಲ ಕಾಲಕ್ಕೆ ಒದಗಿಸುವುದು ಬಹಳ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ಶಾಲೆಯ ಅಧ್ಯಾಪಕರು/ ಮುಖ್ಯೋಪಾಧ್ಯಾಯರು ಈ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರೌಢಶಾಲೆಗಳಲ್ಲಿ ಗುಮಾಸ್ತರಿದ್ದರೂ ಶಿಕ್ಷಕರು ಕೆಲವೊಂದು ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಅಂಕಿ ಅಂಶಗಳನ್ನು ಇಲಾಖೆಗೆ ಒದಗಿಸುವ ಈ ಕೆಲಸವು ಪುನರಾವರ್ತನೆಯ ಕೆಲಸವಾಗಿದ್ದರೂ,ಬಹಳ ಜಾಗರೂಕತೆಯಿಂದ ಮತ್ತು ಸಮರ್ಪಕವಾಗಿ ತಪ್ಪಿಲ್ಲದೆ ಮಾಡಬೇಕಾಗುತ್ತದೆ.

ಒಮ್ಮೆ ಬೇಕಾದ ವಿವರಗಳನ್ನು ಕಂಪ್ಯೂಟರ್ ಗೆ ತಪ್ಪಿಲ್ಲದೆ ಒದಗಿಸಿದರೆ, ಕಾಲ ಕಾಲಕ್ಕೆ ಪದೇ ಪದೇ ಬೇಕಾಗಿರುವ ವರದಿಗಳನ್ನು ತಪ್ಪಿಲ್ಲದೆ ಕಂಪ್ಯೂಟರ್ ಮೂಲಕ ಪಡೆದು ಕೊಳ್ಳುವುದು ಅತಿ ಸುಲಭದ ಕೆಲಸ ಎಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇಂತಹ ಕೆಲಸಗಳನ್ನು ಕಂಪ್ಯೂಟರ್ ಮಾಡುವುದರಿಂದ ಅದೇ ಸಮಯವನ್ನು ಅಧ್ಯಾಪಕರು ಅಧ್ಯಾಪನಕ್ಕೆ ತೊಡಗಿಸಿಕೊಂಡರೆ ಅವರಿಗೆ ಕೆಲಸದಲ್ಲಿ ತೃಪ್ತಿ, ಕರ್ತವ್ಯಪಾಲನೆಯಾದಂತೆ. ಇದರಿಂದ ಮಕ್ಕಳ ಕಲಿಕೆಯ ಅಭಿವೃದ್ಧಿಯೂ ಆಗುತ್ತದೆ, ಇದು ಮುಖ್ಯ. ಅದಕ್ಕಾಗಿ ಅವರಿಗಿರುವ ಬೋಧನೇತರ ಕೆಲಸ ಹಗುರವಾಗಲೆಂದು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಶಾಲೆಗಳ ಉಪಯೋಗಕ್ಕಾಗಿ ಬಿಡುಗಡೆ ಮಾಡಲಾಗಿದೆ. ಈ ತಂತ್ರಾಂಶವು ಬರೀ ಸರಕಾರಿ ಶಾಲೆಗಳಿಗೆ ಮಾತ್ರವಲ್ಲ, ಅನುದಾನಿತ, ಅನುದಾನರಹಿತ ಶಾಲೆಗಳಿಗೂ ಉಪಯೋಗಕಾರಿಯಾಗಲಿದೆ.

ಕಾಲ ಕಾಲಕ್ಕೆ ಶಿಕ್ಷಣ ಇಲಾಖೆಗೆ ಒದಗಿಸಬೇಕಾದ ವರದಿಗಳಾದ ಅಧ್ಯಾಪಕರ ಪಟ್ಟಿ, ತರಗತಿ/ಪ್ರವರ್ಗ/ಧರ್ಮಕ್ಕನುಸಾರವಾಗಿ ಮಕ್ಕಳ ದಾಖಲಾತಿ/ ಹಾಜರಾತಿ, ಪರೀಕ್ಷಾ ಫಲಿತಾಂಶ, ಬಿಸಿ ಊಟಕ್ಕೆ ಸಂಬಂಧಿಸಿದ ಪದಾರ್ಥಗಳ ದಾಸ್ತಾನು/ಸ್ವೀಕೃತಿ/ಬಳಕೆ, ಶಾಲಾ ಅನುದಾನ/ಹಣದ ಸ್ವೀಕೃತಿ/ಬಳಕೆ, ಖರ್ಚಿನ ವಿವರ ಇತ್ಯಾದಿಗಳನ್ನು ಈ ತಂತ್ರಾಂಶದ ಮೂಲಕ ಶಾಲೆಯ ಗಣಕಯಂತ್ರದಲ್ಲಿ ದಾಖಲಿಸಬಹುದು. ಅಗತ್ಯವೆನಿಸಿದಾಗ ಪೂರಕ/ ಬದಲಾವಣೆಗೊಂಡ ಮಾಹಿತಿಗಳನ್ನು ಸೇರಿಸಬಹುದು. ಪ್ರಿಂಟರ್ ಇದ್ದಲ್ಲಿ ಪ್ರತಿತೆಗೆದು ಅಥವಾ ’ನಮೂನೆ’ ಇದ್ದಲ್ಲಿ ಭರ್ತಿ ಮಾಡಿ ಸಂಬಂಧಪಟ್ಟವರಿಗೆ ಕಳಿಸಬಹುದು.

ಈ ತಂತ್ರಾಂಶದ ಸಹಾಯದಿಂದ ಯಾವುದೇ ಶಾಲೆಯಲ್ಲಿನ ಸುಮಾರು 99% ಕ್ಕೂ ಮೀರಿದ ದೈನಂದಿನ ಕೆಲಸಗಳನ್ನು ಗಣಕೀಕರಿಸಲು ಸಾಧ್ಯವಿದ್ದು ಶಾಲೆಯ ಉಪಾಧ್ಯಾಯರ ಮತ್ತು ಸಿಬ್ಬಂದಿ ವರ್ಗದ ಸಮಯದ ಉಳಿತಾಯವಾಗಲಿದ್ದು ಅವರ ಸಮಯದ ಸದ್ಬಳಕೆಯಾಗಲಿದೆ. ಹಾಗೆ ಉಳಿಸಿಕೊಂಡ ಸಮಯವನ್ನು ಪಾಠ ಮಾಡಲು ಅಥವಾ ಪಠ್ಯೇತರ ಚಟುವಟಿಕೆಗೆ ಬಳಸಿಕೊಂಡು ಮಕ್ಕಳ ಅಭಿವೃದ್ಧಿಗಾಗಿ ದುಡಿಯಬಹುದು.

ಇಷ್ಟೆಲ್ಲ ಅನುಕೂಲ ಇರುವ ತಂತ್ರಾಂಶದ ಬೆಲೆ- ಶೈಕ್ಷಣಿಕ ಪ್ರಗತಿಯಕಡೆಗೆ ಶಿಕ್ಷಕರು ಹೊಂದುವ ಬದ್ಧತೆ ಮಾತ್ರ.

ಇದನ್ನು www.FREEganita.com ಮತ್ತು www.eShale.org ಪ್ರಾಯೋಜಿಸಿ,ಅಭಿವೃದ್ಧಿಪಡಿಸಿ ನಿಮ್ಮ ಮುಂದೆ ಇಡುತ್ತಿದೆ. ಇದು ಅವುಗಳ ಹಲವಾರು ಯೋಜನೆಗಳಲ್ಲಿ ಒಂದಾಗಿರುತ್ತದೆ.



ಗಣಕೀಕರಣಕ್ಕೆ ಮಾಡಬೇಕಾದ ಕೆಲಸಗಳು ಮತ್ತು ಅವುಗಳ ಆವರ್ತತೆ:

ಸಂ.

ಮಾಡಬೇಕಾದ ಕೆಲಸ

ಉದ್ದೇಶ

ಯಾವಾಗ, ಎಷ್ಟು ಬಾರಿ/ಏಕೆ

1

ಶಾಲೆಯ ವಿವರ

ವರದಿಗಳಲ್ಲಿ ಶಾಲೆಯ ವಿವರಗಳಿಗೆ

ಒಮ್ಮೆ. ಆರಂಭದಲ್ಲಿ ಮಾತ್ರ

2

ಎಲ್ಲಾ ಅಧ್ಯಾಪಕರ ವಿವರ

ಇಲಾಖೆಗೆ ವರದಿ

ಒಮ್ಮೆ, ಶಿಕ್ಷಕ ಶಾಲೆಗೆ ಸೇರಿದಾಗ, ಶಿಕ್ಷಕ ಶಾಲೆ ಬಿಟ್ಟಾಗ

3

ಪ್ರವರ್ಗ,ಧರ್ಮ,ಭಾಷೆಗಳು, ಗರಿಷ್ಠ ಅಂಕಗಳ ನಿಗದಿ

ವಿವಿಧ ವರದಿಗಳಲ್ಲಿ ನಮೂದನೆಗಾಗಿ

ಒಮ್ಮೆ ಆರಂಭದಲ್ಲಿ, ನಂತರ ಹೊಸದಾಗಿ ವಿವರಗಳನ್ನು ಸೇರಿಸಬೇಕಾದಾಗ/ ಬದಲಿಸಬೇಕಾದಾಗ

4

ಬಿಸಿ ಊಟದ ಪದಾರ್ಥಗಳ ಪ್ರಮಾಣ

ಬಿಸಿ ಊಟದ ಲೆಕ್ಕ

ಒಮ್ಮೆ, ವಿದ್ಯಾರ್ಥಿಯ ತಲಾ ಪ್ರಮಾಣ ಬದಲಾದಾಗ

5

ಬಿಸಿ ಊಟದ ಪದಾರ್ಥಗಳ ಸ್ವೀಕೃತಿ

ಬಿಸಿ ಊಟದ ಲೆಕ್ಕ

ಪದಾರ್ಥಗಳನ್ನು ಸ್ವೀಕರಿಸಿದಾಗ.

6

ವಿದ್ಯಾರ್ಥಿಗಳ ದಾಖಲಾತಿಯ ವಿವರ

ಇಲಾಖೆಗೆ ವರದಿ

ಆರಂಭದಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳ ವಿವರ ಆನಂತರ ಹೊಸ ವಿದ್ಯಾರ್ಥಿ ಸೇರಿದಾಗ.

7

ದೈನಿಕ ಹಾಜರಾತಿ

ಇಲಾಖೆಗೆ ವರದಿ

ಪ್ರತಿ ದಿನ. ಬಿಸಿ ಊಟದ ಲೆಕ್ಕ ಹಾಕಲು.

8

ಹಾಜರಾತಿ ಧೃಢೀಕರಣ/ಬಿಸಿ ಊಟದ ಲೆಕ್ಕ

ಬಿಸಿ ಊಟದ ಲೆಕ್ಕ

ಪ್ರತಿ ದಿನ. ಈ ಕಾರ್ಯ ಆದಮೇಲೆ ದೈನಿಕ ಹಾಜರಾತಿಯನ್ನು ಬದಲಿಸಲು ಸಾಧ್ಯವಿಲ್ಲ.

9

ಅಂಕ ಪಟ್ಟಿ ತಯಾರಿ

ಇಲಾಖೆಗೆ ವರದಿ

ವರ್ಷಕ್ಕೆ ಎರಡು ಬಾರಿ

10

ಮಾಸಿಕ ಮುಕ್ತಾಯ

(ಬಿಸಿ ಊಟ)

ಹೊಸ ತಿಂಗಳ ಲೆಕ್ಕ

ಪ್ರತೀ ತಿಂಗಳ ಆರಂಭದಲ್ಲಿ.ತಿಂಗಳಲ್ಲಿನ ಎಲ್ಲಾ ಕೆಲಸದ ದಿನಗಳ ಹಾಜರಾತಿಯ ಧೃಢೀಕರಣ /ಬಿಸಿ ಊಟದ ಲೆಕ್ಕ ಮುಗಿದ ಮೇಲೆ( ಸ್ಕ್ರೀನ್ 8)

11

ಅಕೌಂಟ್ಸ್ ವಿವರ

ಅನುದಾನದ/ಸ್ವೀಕೃತಿ/ ವೆಚ್ಚದ ವಿವಿಧ ಬಾಬತ್ತುಗಳು

ಸಾಮಾನ್ಯ ಬಳಕೆಯಲ್ಲಿರುವ ಕೆಲವು ಬಾಬತ್ತುಗಳ ಸಂಕೇತ/ವಿವರಗಳನ್ನು ನೀಡಿದ್ದು. ಹೊಸದನ್ನು ಸೇರಿಸಬಹುದು/ ಬದಲಿಸಬಹುದು

12

ಆರಂಭಿಕ ಶಿಲ್ಕು(ಅಕೌಂಟ್ಸ್)

ಅಕೌಂಟ್ಸ್ ಲೆಕ್ಕ ಹಾಕಲು

ಒಮ್ಮೆ, ತಂತ್ರಾಂಶ ಬಳಸಲು ಶುರು ಮಾಡಿದಾಗ ಮಾತ್ರ

13

ಸ್ವೀಕೃತಿ/ಆದಾಯ (ಅಕೌಂಟ್ಸ್)

ಆದಾಯ/ ಅನುದಾನದ ವಿವರ

ಬೇರೆ ಬೇರೆ ಬಾಬತ್ತುಗಳಿಗೆ ಹಣದ ನಿಗದಿಪಡಿಸುವಿಕೆ:ಹಣ ಸ್ವೀಕರಿಸಿದಾಗ.

14

ವ್ಯಯ (ಅಕೌಂಟ್ಸ್)

ಖರ್ಚಿನ ವಿವರ

ವಿವಿಧ ಬಾಬತ್ತುಗಳಿಗೆ ಖರ್ಚು ಮಾಡಿದ ಹಣದ ವಿವರ: ಹಣ ಖರ್ಚುಮಾಡಿದಾಗ.

15

ವಾರ್ಷಿಕ ಮುಕ್ತಾಯ (ಅಕೌಂಟ್ಸ್)

ಹೊಸ ವರ್ಷದ ಲೆಕ್ಕ

ವರ್ಷಕ್ಕೊಮ್ಮೆ.ವರ್ಷದ ಅಂತಿಮ ಶಿಲ್ಕು ಮುಂದಿನ ವರ್ಷದ ಆರಂಭಿಕ ಶಿಲ್ಕು ಆಗುತ್ತದೆ.



ವಿ. ಸೂ:

ಕೆಲವು ದೈನಂದಿನ ಸಂಸ್ಕರಣಾ ಕೆಲಸವನ್ನು( ಉದಾ: ದೈನಿಕ ಹಾಜರಾತಿ)ಆಯಾಯ ದಿನವೇ ಮಾಡುವುದು ಒಳ್ಳೆಯದಾದರೂ ಅಂದೇ ಮಾಡಬೇಕೆಂದು ನಿಯಮವಿರುವುದಿಲ್ಲ. ಮುಂದಿನ ತಿಂಗಳ ಲೆಕ್ಕಾಚಾರ ಆರಂಭ ಮಾಡುವ ಮುಂಚೆ ಹಿಂದಿನ ತಿಂಗಳ ಎಲ್ಲಾ ದಿನಗಳ ಸಂಸ್ಕರಣಾ ಕೆಲಸವನ್ನು ಮುಗಿಸಿರಬೇಕು.

ಒಮ್ಮೆ ಯಾವುದೇ ದಿನದ ಬಿಸಿ ಊಟದ ಲೆಕ್ಕವನ್ನು ಹಾಕಿದ ನಂತರ/ ಹಾಜರಾತಿ ಧೃಢೀಕರಣ ಮಾಡಿದ ನಂತರ, ಆ ದಿನದ ಅಥವಾ ಅದಕ್ಕಿಂತ ಹಿಂದಿನ ದಿನಗಳ ಹಾಜರಾತಿಯನ್ನು ಮತ್ತೆ ಬದಲಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಬಿಸಿ ಊಟದ ಲೆಕ್ಕ ಹಾಕುವ ಮುಂಚೆ/ಹಾಜರಾತಿ ಧೃಢೀಕರಣ ಮಾಡುವ ಮುಂಚೆ, ಆ ದಿನದ ಹಾಜರಾತಿ ಸರಿಯಾಗಿ ಹಾಕಿರುವಂತೆ ನೋಡಿ ಕೊಳ್ಳಬೇಕು.

ತಂತ್ರಾಂಶದಲ್ಲಿ ಉಪಯೋಗಿಸುವ ಪದಗಳ ವಿವರಣೆ:


ಪದ

ವಿವರಣೆ

ಉದಾಹರಣೆ

ಕಾಲಂ/ಫೀಲ್ಡ್

ಒಂದು ವಿಷಯಕ್ಕೆ ಸಂಬಂಧಿಸಿದ, ಒಂದೇ ಗುಣ ಲಕ್ಷಣ ಹೊಂದಿರುವಂತಹದು.

ಹೆಸರು, ಹುಟ್ಟಿದ ತಾರೀಕು, ತರಗತಿ ..

ರೋ/ಸಾಲು/ಪಂಕ್ತಿ

ಒಬ್ಬ ವ್ಯಕ್ತಿಗೆ/ ವಸ್ತುವಿಗೆ/ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಕಾಲಂ ಗಳ ಸಮೂಹ

ವಿದ್ಯಾರ್ಥಿಯ ಹೆಸರು, ಹುಟ್ಟಿದ ತಾರೀಕು, ತರಗತಿ .. ಇವುಗಳ ಸಮೂಹ/ಜೋಡಣೆ.

ಟೇಬಲ್

ರೋಗಳ ಸಮೂಹ

ಅಧ್ಯಾಪಕರು, ವಿದ್ಯಾರ್ಥಿ,ಹಾಜರಾತಿ

ಮಾಸ್ಟರ್ ಟೇಬಲ್

ಹೆಚ್ಚು ಬದಲಾವಣೆ ಆಗದೇ ಇರುವಂತಹ ಟೇಬಲ್(ಸ್ಥಿರ)

ಶಾಲೆ, ಅಧ್ಯಾಪಕರು,ವಿಷಯ

ಡೇಟಾಬೇಸ್

ಟೇಬಲ್ ಗಳ ಸಮೂಹ

ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಇರುವ ದತ್ತ ಸಂಚಯ.

ಪಾಸ್ವರ್ಡ್

ತಂತ್ರಾಂಶ ದುರ್ಬಳಕೆ ಆಗದಿರುವಂತೆ ಇರುವ ಗುಪ್ತ ಸಂಕೇತ

ಇದನ್ನು ಪದೇ ಪದೇ ಬದಲಾಯಿಸಿ ಬೇರೆಡೆ ಬರೆದಿಟ್ಟುಕೊಳ್ಳಬೇಕು. ಇದು ಗೊತ್ತಿಲ್ಲದಿದ್ದರೆ, ತಂತ್ರಾಂಶ ಉಪಯೋಗಿಸಲು ಬರುವುದಿಲ್ಲ

ತಂತ್ರಾಂಶವನ್ನು ಉಪಯೋಗಿಸುವ ಮೊದಲು ಶಾಲೆಯ ವಿವರಗಳಿರುವ ’ಶಾಲೆ’ ಮಾಸ್ಟರ್ ಟೇಬಲ್ ನಲ್ಲಿನ ವಿವರಗಳು ಸರಿಯಾಗಿರಬೇಕು.

"ಪ್ರವರ್ಗ" ಟೇಬಲ್ ನಲ್ಲಿ ಪ.ಜಾತಿ, .ಪಂಗಡ, ಓಬಿಸಿ, ಸಾಮಾನ್ಯ ಎನ್ನುವ ರೋ ಗಳಿವೆ

ಧರ್ಮ" ಟೇಬಲ್ ನಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವ ರೋ ಗಳಿವೆ

ಪಠ್ಯ ವಿಷಯ" ಟೇಬಲ್ ನಲ್ಲಿ 6 ವಿಷಯಗಳ ರೋ ಗಳಿವೆ.

ಭಾಷೆ" ಟೇಬಲ್ ನಲ್ಲಿ 11 ಭಾಷೆಗಳ ರೋ ಗಳಿವೆ.

ಅಗತ್ಯ ಇದ್ದರೆ, ಮೇಲಿನ ಟೇಬಲ್ ಗಳಿಗೆ ಇನ್ನೂ ಅಗತ್ಯ ಇರುವ ರೋ ಗಳನ್ನು ಸೇರಿಸಬಹುದು.

ಅಧ್ಯಾಪಕ" ಟೇಬಲ್ ಗೆ ಶಾಲೆಯಲ್ಲಿರುವ ಅಧ್ಯಾಪಕರುಗಳ ಹೆಸರುಗಳನ್ನು ಸೇರಿಸಿ.

ವಿದ್ಯಾರ್ಥಿ" ಟೇಬಲ್:

ಪ್ರತೀ ವಿದ್ಯಾರ್ಥಿಯನ್ನು ಶಾಲೆಗೆ ಸೇರಿಸಿಕೊಂಡಾಗ , ಪ್ರತಿಯೊಬ್ಬನಿಗೂ ಏಕೈಕ ಮತ್ತು ಪ್ರತ್ಯೇಕ ಅಡ್ಮಿಶನ್ ಸಂಖ್ಯೆ ಯನ್ನು ನೀಡಬೇಕು. ಇದು ಯಾವುದೇ ಕಾರಣಕ್ಕೂ ಪುನರಾವರ್ತನೆ ಆಗಬಾರದು. ಶಾಲೆಗೆ ಹಿಂದೆಯೇ ಸೇರಿಕೊಂಡು ಈಗ ಕಲಿಯುತ್ತಿರುವ ವಿದ್ಯಾರ್ಥಿಗೂ ಅಡ್ಮಿಶನ್ ಸಂಖ್ಯೆಯನ್ನು ನೀಡಬೇಕು. (ಅಡ್ಮಿಶನ್ ಸಂಖ್ಯೆ 00001 ರಿಂದಲೂ ಆರಂಭವಾಗಬಹುದು ಅಥವಾ ಇಸವಿ ಮತ್ತು ಕ್ರಮ ಸಂಖ್ಯೆಯನ್ನು ಸೂಚಿಸುವಂತೆಯೂ ಇರಬಹುದು ಉದಾಹರಣೆಗೆ 2008 ರಲ್ಲಿ ಸೇರಿದ ವಿದ್ಯಾರ್ಥಿಗೆ ಅದು 2008001 ಎನ್ನುವ ಕ್ರಮ ಸಂಖ್ಯೆಯಿಂದ ಆರಂಭವಾಗಬಹುದು , 2008 ರಲ್ಲಿ ಸೇರಿದವರ ಅಡ್ಮಿಶನ್ ಸಂಖ್ಯೆ 2008001,2008002 . .2008999 ಎಂದಿರಬಹುದು).

ಈ ತಂತ್ರಾಂಶವನ್ನು ಉಪಯೋಗಿಸಲು, ಪ್ರತೀ ಸಲ admin ಅಥವಾ headmaster ಬಳಸುವವ(ಯೂಸರ್) ಆಗಿ ಸರಿಯಾದ ಪಾಸ್ವರ್ಡ್ ನೀಡಿ ಪ್ರವೇಶ(ಲಾಗಿನ್) ಆಗಬೇಕು.