Shalatantra : School Administration Software
 
 

In many of the schools and in particular government schools, teachers and headmasters are burdened with many administrative works. One such task is periodic submission of reports to education department. In addition, schools which have mid day meal program need to maintain stock, receipts and consumption of items used for mid day meals on a day to day basis. 'Shalatantra' which was developed using open source software running on Windows operating system helps the schools do repetitive work accurately.

The features are:

1. Computerization activities starting from student’s admission, till they leave the school.
2. Apllicable to Primary, Higher Primary and High schools.
3. Useful for government, aided and unaided Schools.
4. Admission, Daily attendance, mid day meal accounting, marks entry..,.
5. Periodic generation of statistics required by education department.
6. Accounting module to take care of income and expenditure.
7. Data entry/access protected by Password.
8. Sample data in the CD itself for easy learning.
9. Videos/Guides on installation and correct use of product.
10. Entries can be in Kannada or English.
11. Sample version freely downloadable from www.eshale.org/shalatantra.

Available in CD.

 

 
     
 
ಶಾಲಾತಂತ್ರ : ಶಾಲಾ ಆಡಳಿತದ ಗಣಕೀಕರಣ ತಂತ್ರಾಂಶ
 
 

ಇದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ವಿದ್ಯಾಧಿಕಾರಿಗಳಿಗೆ ದಾಖಲೆಸಲ್ಲಿಸುವ, ಇರಿಸಿಕೊಳ್ಳುವ ಕೆಲಸದಲ್ಲಿ ಸಮಯ ಉಳಿಸುವ ವಿದ್ಯುನ್ಮಾನ ಸೌಲಭ್ಯ. ಶಿಕ್ಷಕರಾಗಿ ಅಗತ್ಯವಾಗಿ ಮಾಡಲೇಬೇಕಾಗಿರುವ ಬೋಧನಾಪ್ರಕ್ರಿಯೆಗೆ ಸಮಯಹೊಂದಿಸಲು ಇರುವ ಸುಲಭಮಾರ್ಗ.
ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯಕ್ರಮಗಳಿಗೆ ಶಾಲೆಗಳು, ಅಂಕಿ ಅಂಶಗಳನ್ನು ಶಿಕ್ಷಣ ಇಲಾಖೆಗೆ ಕಾಲ ಕಾಲಕ್ಕೆ ಒದಗಿಸುವುದು ಬಹಳ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ಶಾಲೆಯ ಅಧ್ಯಾಪಕರು/ ಮುಖ್ಯೋಪಾಧ್ಯಾಯರು ಈ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರೌಢಶಾಲೆಗಳಲ್ಲಿ ಗುಮಾಸ್ತರಿದ್ದರೂ ಶಿಕ್ಷಕರು ಕೆಲವೊಂದು ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಅಂಕಿ ಅಂಶಗಳನ್ನು ಇಲಾಖೆಗೆ ಒದಗಿಸುವ ಈ ಕೆಲಸವು ಪುನರಾವರ್ತನೆಯ ಕೆಲಸವಾಗಿದ್ದರೂ,ಬಹಳ ಜಾಗೂರತೆಯಿಂದ ಮತ್ತು ಸಮರ್ಪಕವಾಗಿ ತಪ್ಪಿಲ್ಲದೆ ಮಾಡಬೇಕಾಗುತ್ತದೆ.ಒಮ್ಮೆ ಬೇಕಾದ ವಿವರಗಳನ್ನು ಕಂಪ್ಯೂಟರ್ ಗೆ ತಪ್ಪಿಲ್ಲದೆ ಒದಗಿಸಿದರೆ, ಕಾಲ ಕಾಲಕ್ಕೆ ಪದೇ ಪದೇ ಬೇಕಾಗಿರುವ ವರದಿಗಳನ್ನು ತಪ್ಪಿಲ್ಲದೆ ಕಂಪ್ಯೂಟರ್ ಮೂಲಕ ಪಡೆದು ಕೊಳ್ಳುವುದು ಅತಿ ಸುಲಭದ ಕೆಲಸ ಎಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇಂತಹ ಕೆಲಸಗಳನ್ನು ಕಂಪ್ಯೂಟರ್ ಮಾಡುವುದರಿಂದ ಅದೇ ಸಮಯವನ್ನು ಅಧ್ಯಾಪಕರು ಅಧ್ಯಾಪನಕ್ಕೆ ತೊಡಗಿಸಿಕೊಂಡರೆ ಅವರಿಗೆ ಕೆಲಸದಲ್ಲಿ ತೃಪ್ತಿ, ಕರ್ತವ್ಯಪಾಲನೆಯಾದಂತೆ. ಇದರಿಂದ ಮಕ್ಕಳ ಕಲಿಕೆಯ ಅಭಿವೃದ್ಧಿಯೂ ಆಗುತ್ತದೆ, ಇದು ಮುಖ್ಯ. ಅದಕ್ಕಾಗಿ ಅವರಿಗಿರುವ ಬೋಧನೇತರ ಕೆಲಸ ಹಗುರವಾಗಿಸುವ ತಂತ್ರಾಂಶ ಇದಾಗಿದೆ.

ವಿಶೇಷತೆಗಳು:

1. ಪ್ರಾಥಮಿಕ/ಉನ್ನತ ಪ್ರಾಥಮಿಕ/ಪ್ರೌಢ ಶಾಲೆಗಳಿಗೆ ಅನ್ವಯ.
2. ಸರಕಾರಿ ಶಾಲೆಗಳಿಗಲ್ಲದೆ, ಅನುದಾನಿತ, ಅನುದಾನರಹಿತ ಶಾಲೆಗಳಿಗೂ ಉಪಯೋಗಕಾರಿ.
3. ಕಾಲ ಕಾಲಕ್ಕೆ ಶಿಕ್ಷಣ ಇಲಾಖೆಗೆ ಒದಗಿಸಬೇಕಾದ ಅಂಕಿ ಅಂಶಗಳು .
4. ದಾಖಲಾತಿ, ಹಾಜರಾತಿ,ಬಿಸಿ ಊಟದ ಲೆಕ್ಕ,ಅಂಕ ಪಟ್ಟಿ ..
5. ಶಾಲಾ ಅನುದಾನ/ಹಣದ ಸ್ವೀಕೃತಿ/ಬಳಕೆ, ಖರ್ಚಿನ ವಿವರ(ಅಕೌಂಟಿಗ್).
6. ಪಾಸ್ವರ್ಡ್ ಮೂಲಕ ಸುರಕ್ಷಿತ ಬಳಕೆ.
7. ವಿವರಗಳು ಕನ್ನಡ/ಇಂಗ್ಲೀಷ್ ನಲ್ಲಿ.
8. ಬ್ಯಾಕ್ ಅಪ್/ರಿಸ್ಟೋರ್ ಸೌಲಭ್ಯ
9. ಅನುಸ್ಥಾಪನಾ ಮತ್ತು ಬಳಕೆಯ ಕೈಪಿಡಿ/ವಿಡಿಯೋ.
10. ಬಳಸುವುದನ್ನು ಕಲಿಯಲು ಸುಲಭವಾಗಿಸುವ ಮಾದರಿ ದಾಖಲೆಗಳು ಸಿಡಿಯಲ್ಲೇ.

ಸಿಡಿಯಲ್ಲಿ ಲಭ್ಯವಿದೆ.
ಮಾದರಿ ಶಾಲಾತಂತ್ರದ ಉಚಿತ ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ಕಿಸಿ: www.eshale.org/shalatantra
ಈ ತಂತ್ರಾಂಶದ ಸಹಾಯದಿಂದ ಯಾವುದೇ ಶಾಲೆಯಲ್ಲಿನ ಸುಮಾರು 99% ಕ್ಕೂ ಮೀರಿದ ದೈನಂದಿನ ಕೆಲಸಗಳನ್ನು ಗಣಕೀಕರಿಸಲು ಸಾಧ್ಯವಿದ್ದು, ಶಾಲೆಯ ಉಪಾಧ್ಯಾಯರ ಮತ್ತು ಸಿಬ್ಬಂದಿ ವರ್ಗದ ಸಮಯದ ಉಳಿತಾಯವಾಗಲಿದ್ದು ಅವರ ಸಮಯದ ಸದ್ಬಳಕೆಯಾಗಲಿದೆ. ಹಾಗೆ ಉಳಿಸಿಕೊಂಡ ಸಮಯವನ್ನು ಪಾಠ ಮಾಡಲು ಅಥವಾ ಪಠ್ಯೇತರ ಚಟುವಟಿಕೆಗೆ ಬಳಸಿಕೊಂಡು ಮಕ್ಕಳ ಅಭಿವೃದ್ಧಿಗಾಗಿ ದುಡಿಯಬಹುದು.