ಇಲ್ಲಿನ ಪ್ರಶ್ನೆಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಲಾಗಿದೆ. ಆ ಪ್ರಶ್ನೆಗಳಿಗೆ ನುರಿತ, ಅನುಭವೀ ಶಿಕ್ಷಕರು ಮತ್ತು ಸಂಪನ್ಮೂಲವ್ಯಕ್ತಿಗಳು ಉತ್ತರಗಳನ್ನು ಒದಗಿಸಿಕೊಟ್ಟಿದ್ದಾರೆ. ಅವುಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಟೈಪಿಸಿ ಇಲ್ಲಿ ಅಳವಡಿಸಲಾಗಿದೆ. ಸಾಕಷ್ಟು ಗಮನವಿಟ್ಟು ಅತಿ ಜಾಗರೂಕತೆಯಿಂದ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಿದ್ದರೂ, ತಪ್ಪುಗಳು ನುಸುಳಿರಲೂ ಬಹುದು. ಅಕಸ್ಮಾತ್ ತಪ್ಪುಗಳಿದ್ದಲ್ಲಿ, ಅವುಗಳ ಉಪಯೋಗದಿಂದ ಆಗುವ ಅನಾಹುತ/ಪ್ರಮಾದಗಳಿಗೆ ಪ್ರಶ್ನೆ ಮತ್ತು ಉತ್ತರಗಳನ್ನು ಸಿದ್ಧಪಡಿಸಿಕೊಟ್ಟ ಶಿಕ್ಷಕರುಗಳಾಗಲೀ, ಸಂಪನ್ಮೂಲವ್ಯಕ್ತಿಗಳಾಗಲೀ ಅಥವಾ ಇಲ್ಲಿ ಅವುಗಳನ್ನು ಸಂಗ್ರಹಿಸಿ ನೀಡಿರುವ eShale.org ಆಗಲೀ ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲ. ತಪ್ಪುಗಳೇನಾದರೂ ನಿಮ್ಮ ಗಮನಕ್ಕೆ ಬಂದಲ್ಲಿ, ಪ್ರಶ್ನೆ ಸಂಖ್ಯೆ ನೀಡಿ ನಮಗೆ qkosha@eshale.org ಮೂಲಕ ಇಮೈಲ್ ಕಳಿಸಿ. ಅವುಗಳು ಸರಿಯೆಂದು ಕಂಡುಬಂದಲ್ಲಿ, ಅವುಗಳನ್ನು ಅಂತರ್ಜಾಲತಾಣದಲ್ಲಿ ಸರಿಪಡಿಸಿ, ಮುಂದಿನ ಡಿವಿಡಿ ಆವೃತ್ತಿಗಳಲ್ಲಿ ಸರಿಪಡಿಸಲಾಗುತ್ತದೆ. ಇದೆಕ್ಕೆ ಬೇಕು ನಿಮ್ಮೆಲ್ಲರ ಸಹಕಾರ ಮತ್ತು ಸಹಾಯ.
ನಾವು ಮುಕ್ತತಂತ್ರಾಂಶದ ಪ್ರತಿಪಾದಕರಾಗಿದ್ದು, ಇಲ್ಲಿನ ಪ್ರಶ್ನೆ ಮತ್ತು ಉತ್ತರಗಳು ಮುಕ್ತತಂತ್ರಾಂಶವಾದ ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಸರಿಯಾಗಿ ಮೂಡಿಬರುವಂತೆ ನೋಡಿಕೊಳ್ಳಲಾಗಿದೆ. ಇತರ ಬ್ರೌಸರ್ ಗಳಲ್ಲಿ ಇದನ್ನು ಪರೀಕ್ಷಿಸದೇ ಇರುವುದರಿಂದ ಅವುಗಳಲ್ಲಿ ಇದು ಸರಿಯಾಗಿ ಕೆಲಸ ನಿರ್ವಹಿಸದೇ ಇರಬಹುದು. ಮುಕ್ತತಂತ್ರಾಂಶದ ಮಾಹಿತಿಗಾಗಿ ಹಾಗೂ ಕಂಪ್ಯೂಟರ್ ನ್ನು ಬಳಸುವುದನ್ನು ಕಲಿಯಲು ನಮ್ಮದೇ ಇನ್ನೊಂದು ಯೋಜನೆಯಾದ ಗಣಕ1,2,3 ಗಮನಿಸಿ.

 
CLOSE WINDOW