How are we different from others?:
eShale aims at making learning simpler and interesting for students and the art of teaching more innovative for teachers, keeping technology as the mode of delivery in all our products and services. We have incorporated technologies such as HTML5,Databases and open source software in our services and products along with unconventional ways of getting ideas through. We do not accept or solicit money from individuals or organisations and hence in that sense we are not an NGO. We are a set of professionals coming from different background who have joined hands together to make a difference in lives of students and teachers to bring out quality services free of cost and quality products at a very low cost. The best way to support us is to make aware of existence of our services and products to the needy. One could also help us and in turn students and teachers, by donating our products to the needy in ones and hundreds. In the past, several organisations have sponsored our products and we do accept sponsorship for our products.

ನಾವು ಇತರರಿಗಿಂತ ಹೇಗೆ ಭಿನ್ನರು?:
ಕಲಿಸುವುದು ಸರಳವೂ ಆಸಕ್ತಿದಾಯಕವೂ ಆಗಿದ್ದರೆ ವಿದ್ಯಾರ್ಥಿಗಳು ಬಹುಬೇಗ ವಿಷಯಗ್ರಹಣ ಮಾಡಿಕೊಳ್ಳುತ್ತಾರೆ ಎನ್ನುವುದು  ತಿಳಿಯದ ವಿಷಯವೇನಲ್ಲ. ಇದಕ್ಕಾಗಿ ಶಿಕ್ಷಕರ ಕೈಗಳನ್ನು ಬಲಪಡಿಸಬೇಕಾದ್ದು ಬಹಳ ಅಗತ್ಯ. ಸರ್ವವ್ಯಾಪಿಯಾಗಿರುವ ಈಗಿನ ಕಂಪ್ಯೂಟರ್ ಯುಗದಲ್ಲಿ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಆಧರಿತ ತಂತ್ರಜ್ಞಾನವನ್ನು  ಸೂಕ್ತ ರೀತಿಯಲ್ಲಿ ಸಮರ್ಪಕವಾಗಿ ಬಳಸಿಕೊಂಡರೆ  ಕಲಿಸುವಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದೂ ಅಲ್ಲದೆ  ಕಲಿಸುವವರ ಮೇಲಿನ ಹೊರೆಯನ್ನು ತಗ್ಗಿಸಬಹುದು. ಈ ನೆಲೆಯಲ್ಲಿ  ಹಲವು ಶೈಕ್ಷಣಿಕ ಯೋಜನೆಗಳನ್ನು  ಅಭಿವೃದ್ಧಿಪಡಿಸಲಾಗಿದೆ.

ಶಿಕ್ಷಣಕ್ಷೇತ್ರದಲ್ಲಿ  ಕ್ರಾಂತಿ ಮಾಡಲಾಗದಿದ್ದರೂ  ಅದರಲ್ಲಿ ಸ್ವಲ್ಪವಾದರೂ ಬದಲಾವಣೆಯನ್ನು  ತರಲು ಬಯಸುವ ವಿವಿಧ ಹಿನ್ನೆಲೆಯನ್ನು ಹೊಂದಿರುವ ಸಮಾನ ಮನಸ್ಕರ  ಸಮೂಹ ನಮ್ಮದು. ನಾವೊಂದು  ಸರಕಾರೇತರ  ಸಂಸ್ಥೆಯಾಗಿದ್ದರೂ(ಎನ್ ಜಿ ಒ), ಯಾರಿಂದಲೂ  ನೇರ ಧನಸಹಾಯವನ್ನು ನಿರೀಕ್ಷಿಸದ/ ಸ್ವೀಕರಿಸದ ಧ್ಯೇಯವನ್ನು ಹೊಂದಿರುವವರು ನಾವು. ಇಂತಹ ಬಹೂಪಯೋಗಿ ಸರಳ ಸುಲಭದ ಶೈಕ್ಷಣಿಕ ಯೋಜನೆಗಳಿದ್ದು  ಅವು ನನ್ನ ಅರಿವಿಗೆ ಬರದೇ ಆ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲನಾದೆನಲ್ಲ ಎಂದು ಯಾವು ವಿದ್ಯಾರ್ಥಿಯೂ  ಕೊರಗಬಾರದು  ಎನ್ನುವುದೇ ನಮ್ಮ ಕಾಳಜಿ. ನಮ್ಮ ಶೈಕ್ಷಣಿಕ ಯೋಜನೆಗಳನ್ನು ಅಗತ್ಯವಿರುವವರಿಗೆ  ತಿಳಿಸುವುದು, ಹಾಗೂ ದೊರಕಿಸಿಕೊಡುವುದೇ  ನಮಗೆ ಮತ್ತು ಕಲಿಯುವವರಿಗೆ ನೀವು ಮಾಡಬಹುದಾದ ಸಹಾಯವಾಗಿರುತ್ತದೆ.