BACK

 

 

ನಮಸ್ಕಾರ.

ಕೆಳಗಿನ ಚಿತ್ರದಲ್ಲಿನ ಭತ್ತದ ಕಣಜಕ್ಕೆ ಸಮರೂಪಿಯಾಗಿರುವ ಈ ಮಾಹಿತಿಕಣಜಕ್ಕೆ ನಿಮಗೆ ಸ್ವಾಗತ.
ಇಲ್ಲಿ ಇದೆ,(ನಿಮ್ಮಮತ್ತು ಎಲ್ಲಾ) ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ, ಮಾತ್ರವಲ್ಲ ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುವ, ಪೂರಕವಾಗುವ ವೈವಿಧ್ಯಮಯ ವಿಷಯಕೋಶ. ಆಸಕ್ತಿಯಿಂದ ತೆರೆದುಕೊಳ್ಳುತ್ತದೆ ವಿಸ್ತಾರವಾಗಿ.
ಇದು ನಮ್ಮ ’ವೆಬ್ ಪೋರ್ಟಲ್’ ಮಾತ್ರವಲ್ಲ; ನಿಮ್ಮೆಲ್ಲರದ್ದೂ ಹೌದು. ಎಲ್ಲರ ಸಮಷ್ಟಿ ಪ್ರಯತ್ನದಿಂದ ವಿಶಿಷ್ಟವೆನಿಸಲಿ ಈ ಜಾಲತಾಣ ಸೃಷ್ಟಿ.
ಇದು ನಮ್ಮ ಗ್ರಾಮೀಣ ಪ್ರದೇಶದ ಅದರಲ್ಲೂ ವಿಶೇಷವಾಗಿ ಕನ್ನಡಮಾಧ್ಯಮದ ಮಕ್ಕಳಿಗಾಗಿ, ಅವರ ಹಿತಕ್ಕಾಗಿ.

ಈಗ ಇದರಲ್ಲಿದೆ,
- ವಿಷಯವಾರು ಪ್ರಶ್ನೆ ಕೋಟಿ-
ಅದರ ಉತ್ತರಗಳು.
- ಸ್ವಯಂ ಮೌಲ್ಯಮಾಪನದ ಸೌಲಭ್ಯ.
- ಪಠ್ಯವಿಷಯ ಸಂಬಂಧಿ ಲೇಖನಗಳು.
- ಮತ್ತಷ್ಟು ಸಹಪಠ್ಯ, ಪಠ್ಯೇತರ ಮಾಹಿತಿಗಳು.
ಇದು ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳು ಮತ್ತು ಅನುಭವೀ ಶಿಕ್ಷಕರ ಸತತ ಪ್ರಯತ್ನದ ಫಲ.
ಇಲ್ಲಿಯ ಸಮಸ್ತ ಮಾಹಿತಿಗಳು ಮುಕ್ತ, ಅನಿರ್ಬಂಧಿತ, ಉಚಿತ.
ಈ ’ವೆಬ್ ಪೋರ್ಟಲ್’ ನಿಮ್ಮದು ಎಂದಿದ್ದೆವು- ಹೌದು ಅದಾಗಲು ಬೇಕು ನಿಮ್ಮ ನೆರವು.

ಅಧ್ಯಾಪನದಲ್ಲಿ ಅಸಾಧಾರಣವಾದುದನ್ನು ಸಾಧಿಸಿದ ಶಿಕ್ಷಕರು,
ವಿದ್ಯಾರ್ಥಿಸ್ನೇಹಿ ಅಧ್ಯಾಪಕರು,
ಸಮಾಜಸೇವಾಸಕ್ತ ಪಾಲಕರು,
ಸಂಪನ್ಮೂಲ ವ್ಯಕ್ತಿಗಳು,
ಪ್ರತಿಭಾವಂತ ವಿದ್ಯಾರ್ಥಿಗಳು,
ಯಾವುದೇ ಕ್ಷೇತ್ರದ ಸಾಧಕರು -ನೀವು.

ನಿಮ್ಮ ಆಸಕ್ತಿಯನ್ನು, ಪ್ರಯೋಗಗಳನ್ನು , ಯೋಜನೆಗಳನ್ನು- ಯೋಚನೆಗಳನ್ನು ಸಿದ್ಧಿಯನ್ನು-ಸಾಧ್ಯತೆಗಳನ್ನು
ಪರಸ್ಪರ ಹಂಚಿಕೊಳ್ಳಲು ಅವಕಾಶ ಇಲ್ಲಿ ಅಬಾಧಿತ.
ಆ ಎಲ್ಲಾ ಮಾಹಿತಿಗಳ ಗುರಿ ಒಂದೇ- ನಿರ್ದಿಷ್ಟವಾಗಿ ಮಕ್ಕಳ ಸಮಗ್ರ ಅಭ್ಯಾಸಕ್ಕೆ ಪೂರಕವಾಗಿರಬೇಕು.
ವಿಶೇಷವಾಗಿ ಕನ್ನಡಮಾಧ್ಯಮದ ಮಕ್ಕಳನ್ನು ಅನುಲಕ್ಷಿಸಿ ಪುಷ್ಟಿಗೊಳಲು ಆಗಲಿ ಈ ಕೋಶ – ತೋಷ.
ಆಗದಿರಲಿ- ಈ ತಾಣ ದುರ್ಬಳಕೆಯ-ಕುಚೋದ್ಯದ ನೆಲೆ.
ಪುಟ್ಟ ಕಟ್ಟುಪಾಡು- ವಿಷಯ ತುಂಬುವವರಿಗೆ,
ಹೆಸರು, ವಿವರ ನೋಂದಣಿಗೊಳಿಸಬೇಕು; ಇವುಗಳ ಕಾಪಿಡುವ ಭರವಸೆ ನಮ್ಮದು.
ತಿದ್ದುವ, ಬದಲಿಸುವ ಅಧಿಕಾರ ಲೇಖಕರಿಗೆ,
ನೋಡುಗರಿಗೆ ಪ್ರತಿಕ್ರಯಿಸುವ ಸೌಲಭ್ಯ- ಸ್ವಾತಂತ್ರ್ಯ-ಸಲಹೆ ಮಾತ್ರ.

ಸರ್ವರಿಗು- ಸಮಾನ ಶೈಕ್ಷಣಿಕ ಪ್ರಯೋಜನಕ್ಕಾಗಿರುವ ಇದಕೆ,
ಉಚಿತವೆಂದೆನಿಸಿದರೆ ನಿಮಗೆ.
ನಮ್ಮೀ ಕಿರಿದು ಕೆಲಸಕ್ಕೆ,
ಸಹಕಾರ ಇರಲಿ ಸಹೃದಯರಾಗಿ.
ಮನದಾಳದ ನಮನಗಳು - ಪಾಲಕರ ಪರವಾಗಿ.

ಇಂತಿ
eಶಾಲೆಯ ಕನಸುಕಂಡವರು.

ವಿ.ಸೂ. ಇಲ್ಲಿ ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ವಿವರಗಳನ್ನು ಟೈಪಿಸಬಹುದು. ಅವುಗಳ ಪರಸ್ಪರ ಬದಲಾವಣೆಗೆ ಕೀ F12 ಒತ್ತಿ.